ಬಾಳೆಹೂವಿನ ಪಲ್ಯ, ರುಚಿ ಮಾತ್ರವಲ್ಲ, ಆರೋಗ್ಯಕ್ಕೆ ಇಷ್ಟೆಲ್ಲಾ ಗುಣಗಳಿವೆ.

ಬಾಳೆಹೂವಿನ ಪಲ್ಯ ರೆಸಿಪಿ ನೀಡಿದ್ದೇವೆ. ಈ ಪಲ್ಯ ತುಂಬಾನೇ ರುಚಿಯಾಗಿರುತ್ತದೆ, ಅಲ್ಲದೆ ದೇಹಕ್ಕೆ ಅಷ್ಟೊಂದು ಪ್ರಯೋಜನಗಳಿವೆ.ಬನ್ನಿ ಈ ಬಾಳೆ ಹೂವಿನ ಪಲ್ಯ ಮಾಡುವುದು ಹೇಗೆ ಎಂದು ನೋಡೋಣ ಬನ್ನಿ

ಬೇಕಾಗುವ ಸಾಮಗ್ರಿ:

ಬಾಳೆಕಾಯಿ ಹೂವು 1

ಈರುಳ್ಳಿ 1

ಹಸಿ ಮೆಣಸು 2-3

ಎಣ್ಣೆ 2 ಚಮಚ

ಅರಿಶಿಣ ಪುಡಿ 1/4 ಚಮಚ

ಅರ್ಧ ಚಮಚ ಉಪ್ಪಿನ ಪುಡಿ

ಸ್ವಲ್ಪ ಕಾಯಿ ತುರಿ

ಮೊಟ್ಟೆ ( ನೀವು ಮೊಟ್ಟೆ ಸೇವಿಸುವುದಾದರೆ 2 ಮೊಟ್ಟೆ ಬಳಸಬಹುದು)

ಮಾಡುವ ವಿಧಾನ
ಬಾಳೆಕಾಯಿ ಹೂವು ಚಿಕ್ಕದಾಗಿ ಕತ್ತರಿಸಿ. ಪ್ಯಾನ್ ಬಿಸಿ ಮಾಡಿ ಎಣ್ಣೆ ಹಾಕಿ ಎಣ್ಣೆ ಬಿಸಿಯಾದಾಗ ಚಿಕ್ಕದಾಗಿ ಕತ್ತರಿಸಿಟ್ಟ ಈರುಳ್ಳಿ ಹಾಗೂ ಉದ್ದವಾಗಿ ಎರಡು ಭಾಗ ಮಾಡಿರುವ ಹಸಿ ಮೆಣಸು ಸೇರಿಸಿ. ಈರುಳ್ಳಿ ಸ್ವಲ್ಪ ಕಂದು ಬಣ್ಣಕ್ಕೆ ಬರುವಾಗ ನೀವು ಚಿಕ್ಕದಾಗಿ ಕತ್ತರಿಸಿಟ್ಟ ಬಾಳೆ ಹೂವು ಹಾಕಿ ಫ್ರೈ ಮಾಡಿ.

ನಂತರ ಉಪ್ಪು, ಅರಿಶಿಣ ಪುಡಿ ಸೇರಿಸಿ 2 ನಿಮಿಷ ಫ್ರೈ ಮಾಡಿ ಸ್ವಲ್ಪ ನೀರು ಸೇರಿಸಿ ಬೇಯಿಸಿ. ನಂತರ ಪಲ್ಯ ಬೆಂದು ಅದರ ನೀರಿನಂಶ ಡ್ರೈಯಾಗುವಾಗ ಸ್ವಲ್ಪ ತೆಂಗಿನ ತುರಿ ಸೇರಿಸಿ ಮಿಕ್ಸ್ ಮಾಡಿದರೆ ಬಾಳೆಹೂವಿನ ಪಲ್ಯ ರೆಡಿ. ಮೊಟ್ಟೆ ಹಾಕುವುದಾದರೆ ತೆಂಗಿನತುರಿ ಬಳಸಬೇಡಿ, ಎರಡು ಮೊಟ್ಟೆ ಹಾಕಿ ಮಿಕ್ಸ್ ಮಾಡಿದರೆ ಸಾಕು.

ಬಾಳೆ ಹೂವಿನ ಪಲ್ಯ ತುಂಬಾನೇ ರುಚಿಯಾಗಿರುತ್ತದೆ. ಬಾಳೆಕಾಯಿ ಹೂವಿನ ಪಲ್ಯ ತಿಂದರೆ ಈ ಪ್ರಯೋಜನಗಳಿವೆ:

ಸೋಂಕು ತಡೆಗಟ್ಟುತ್ತದೆ:
ಬಾಳೆಹೂವಿನ ಪಲ್ಯ ಸೇವನೆ ಮಾಡುವುದರಿಂದ ಬ್ಯಾಕ್ಟಿರಿಯಾಗಳ ಉತ್ಪತ್ತಿ ತಡೆಗಟ್ಟುತ್ತದೆ.

ಮುಟ್ಟಿನ ನೋವು ನಿವಾರಣೆಗೆ ಒಳ್ಳೆಯದು:
ಮುಟ್ಟಿನ ಸಮಯದಲ್ಲಿ ಈ ಪಲ್ಯ ಸೇವಿಸುವುದರಿಂದ ಮುಟ್ಟಿನ ನೀವು ತುಂಬಾನೇ ನಿವಾರಣೆಯಾಗುವುದು.

ಮಧುಮೇಹ ನಿಯಂತ್ರಣಕ್ಕೆ ಒಳ್ಳೆಯದು:
ಮಧುಮೇಹಹಿಗಳಿಗೂ ಈ ಆಹಾರ ಒಳ್ಳೆಯದು. ಇದರಲ್ಲಿ ನಾರಿನಂಶ ಅಧಿಕವಿರುವುದರಿಂದ ಮಧುಮೇಹ ನಿಯಂತ್ರಣಕ್ಕೆ ಸಹಕಾರಿ.

ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು:
ಈ ಹೂವಿನ ಸೇವನೆಯಿಂದ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು. ಈ ಹೂವಿನ ಪಲ್ಯ ಸೇವಿಸುವುದರಿಂದ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು.

ಬಾಣಂತಿಯರಿಗೆ ತುಂಬಾ ಒಳ್ಳೆಯದು:
ಬಾಣಂತಿಯರಿಗೆ ಚಯಪಚಯ ಕ್ರಿಯೆ ಉತ್ತಮವಾಗಿ ನಡೆಯಲು ಹಾಗೂ ಎದೆಹಾಲಿನ ಉತ್ಪತ್ತಿಗೆ ತುಂಬಾನೇ ಸಹಕಾರಿಯಾಗಿದೆ.

ತ್ವಚೆಯ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು:
ಬಾಳೆಹೂವಿನಲ್ಲಿ ವಿಟಮಿನ್ ಸಿ ಇದೆ, ಆದ್ದರಿಂದಾಗಿ ತ್ವಚೆಗೆ ತುಂಬಾನೇ ಒಳ್ಳೆಯದು. ಇದನ್ನು ವಾರಕ್ಕೆ ಒಂದು ಬಾರಿಯಾದರೂ ಸೇವಿಸಿದರೆ ಇನ್ನೂ ಒಳ್ಳೆಯದು.

ಕಿಡ್ನಿಯ ಆರೋಗ್ಯಕ್ಕೆ ಒಳ್ಳೆಯದು:
ಬಾಳೆಹೂವಿನ ಸೇವನೆಯಿಂದ ಕಿಡ್ನಿ ಸ್ಟೋನ್ ತಡೆಗಟ್ಟಬಹುದು.